Friday 26 September 2014

Neenillade...!!!





ನೀನಿಲ್ಲದೆ...!!!


ಪ್ರೀತಿಯ ಆಕಾಶ್,


                        ಇವತ್ತು ಯಾಕೋ ನಿನ್ನ ತುಂಬಾ Miss ಮಾಡ್ಕೋತಾ ಇದ್ದೀನಿ ಅಂತ ಅನ್ನಿಸ್ತು.. In fact, I am missing your smile so much today!! ಈ balcony ನಲ್ಲಿ ನಿಂತಿದ್ರೆ, ತಣ್ಣನೆ ಬೀಸುವ ಆ ತಂಪು ತಂಗಾಳಿಯೊಂದಿಗೆ ನಿನ್ನ ನೆನಪೂ ಕೂಡ ಓಡೋಡಿ ಬರ್ತಾ ಇದೆ... ಹಿತ ನೀಡ್ತಾ ಇದ್ದ ನಿನ್ನ ಆ ಸನಿಹ ಬಿಟ್ಟೂ ಬಿಡದಂತೆ ಕಾಡ್ತಾ ಇದೆ... ಮೌನಮಾತಾಗಿಸುತಿದ್ದ ನಿನ್ನಿರುವು , ನಿನ್ನೊಂದಿಗ ನಾ ಕಟ್ಟಿಕೊಂಡ ಕನಸುಗಳು , ಪ್ರತೀ ಕ್ಷಣ ನೀ ಕೊಡುತಿದ್ದ ಆ secured feeling, ನೀ ತೆಗೆದುಕೊಳ್ಳುತಿದ್ದ ಆ extra care ನಲ್ಲಿ ನಾ ಮತ್ತೆ ಮಗುವಾಗುತಿದ್ದ ಆ ಕ್ಷಣಗಳು, ನೀನು ನನ್ನವನಾಗಿದ್ದ, "ನನ್ನವನೇ" ಆಗಿದ್ದ ಆ ದಿನಗಳು....ಎಲ್ಲಾ ಬರೀ ನೆನಪಾಗಿ ಕಾಡ್ತಾ ಇದೆ. ನನ್ನ Diaryಯಲ್ಲಿ ಇನ್ನೂ ಜತನವಾಗಿರುವ ಆ ನವಿಲುಗರಿ ನಿನ್ನೊಂದಿಗಿನ ಆ ದಿನಗಳನ್ನ ಮತ್ತೆ ಮತ್ತೆ ನೆನಪಿಸುತ್ತಾ ಇದೆ. ಅದೇನೋ Love at first sight ಅಂತ ಹೇಳ್ತಾರಲ್ಲ? ನಿಜ ಹೇಳ್ತೀನಿ ನಂಗೆ first love ಆಗಿದ್ದು ಆ ನವಿಲುಗರಿ ಮೇಲೆ. ನಮ್ಮ college life ನ last day ಇದೆಯಲ್ಲಾ still it is the best day in my Life... ನೀನು filmy ಆಗಿ ನವಿಲುಗರಿಯನ್ನ ಕೊಟ್ಟು, "I’m in love with you" ಅಂದಾಗ ಸ್ವರ್ಗಾನೇ ಬಂದಿಳಿದಂತೆ ಆಯ್ತು...!!!

                        ನಿಂತ ನೀರಲ್ಲೂ ಸಾಗಲೇ ಬೇಕಾದ ದೋಣಿಯಂತೆ ಸುಮ್ಮನೆ ಎಲ್ಲೋ ಕಳೆದು ಹೋಗುತಿದ್ದ ನನ್ನ ಬಾಳಿಗೆ, ತಂಗಾಳಿಯಂತೆ ಬಂದು ತನ್ಮಯಳಾಗುವಂತೆ ಮಾಡಿದೋನು ನೀನು... ತುಟಿಯಂಚಿನ ಕಿರುನಗೆಗೆ ಕಣ್ಣಂಚಿನ ಕಣ್ಣೀರನ್ನ ಒರೆಸೋ ಸಾಮರ್ಥ್ಯ ಇದೆ ಅಂತ ಅಂದ್ಕೊಂಡು ಪ್ರತೀ ಕ್ಷಣಾನು ಯಾವುದೋ ನಂಬಿಕೆಯಿಂದ ಜೀವನ ನಡೆಸುತ್ತಾ ಇದ್ದವಳಿಗೆ, ಈ ಜೀವನವನ್ನ ಪ್ರೀತಿಸೋ ರೀತಿಯನ್ನ ಹೇಳಿಕೊಟ್ಟವನು ನೀನು...  ಪ್ರತೀ ಕ್ಷಣಾನು ನನ್ನದು ಅಂತ ಅಂದ್ಕೊಂಡು Life ನ Enjoy ಮಾಡೋ ರೀತಿಯನ್ನ ನೀನಲ್ಲದೆ ಇನ್ನ್ಯಾರು ತಾನೇ ಕಲಿಸೋಕೆ ಸಾದ್ಯ... ?

                         ಹೇಗಾದರೂ ಇರು ನೀ ನನ್ನವಳಾಗಿರು ಅನ್ನೋ ಆ ನಿನ್ನ ಕಣ್ಣಂಚಿನ ಪ್ರೀತಿ, ಸಾವಿರ ಸಲ ನೀ ಹೇಳ್ತಾ ಇದ್ದ "takecare" ಎಂಬ ಆ ಮಾತು, ನಾನೆಷ್ಟೇ ಬಡ ಬಡಾಯ್ಸಿದ್ರೂ ಹೂ ಗೊಡುತಿದ್ದ ನಿನ್ನ ಆ ತಾಳ್ಮೆ,ಇಳಿ ಸಂಜೆಯ ಹೊತ್ತಲ್ಲಿ ನಿನ್ನ ಕೈ ಹಿಡಿದು ಸುಮ್ಮನೆ ನಡೆಯುತಿದ್ದ ಆ ಸುಮಧುರ ಕ್ಷಣಗಳು...  ಆಗೆಲ್ಲಾ ಈ ಸುತ್ತೋ ಭೂಮಿ, ಮುಳುಗೋ ಸೂರ್ಯ , ಓಡೋ time ಎಲ್ಲ ಒಂದ್ ಸಲ ಹಾಗೇ ನಿಂತು ಬಿಟ್ಟಿದ್ರೆ ಅದೆಷ್ಟು ಚನ್ನಾಗಿರ್ತಿತ್ತು ಅಂತ ಅನ್ನಿಸ್ತಿತ್ತು. 24 Years ನೀನಿಲ್ಲದೇ ನಾನು ಹೇಗೆ ಇದ್ದೆ ಅಂತ ನನಗೆ ಅನ್ನಿಸುತ್ತಿದೆ ! ನಿಮ್ಮ ಮನೆಯವರೆಲ್ಲ ನಮ್ಮಪ್ಪನ ಹತ್ರ ನಮ್ಮ ಬಗ್ಗೆ ಮಾತಾಡಿದಾಗ ನಮ್ಮಪ್ಪಂದು ಒಂದೇ ಹಠ, "ಅವ್ನು software engineer ಆದ್ರೂ soft ಇದ್ದಂಗಿಲ್ಲ, ನೀನೋ journalist, ಕಥೆ ಕವನ ಪುಸ್ತಕ ಅಂತ ಓಡಾಡ್ತಾ ಇದ್ರೆ ಒಬ್ಬರಿಗೊಬ್ಬರಿಗೆ ಹೊಂದಾಣಿಕೆ ಆಗೋದಾದ್ರು ಹೇಗೆ ?"ಅಂತ... ಅದೇ ಈಗ ಅಪ್ಪ ಹೇಳ್ತಾರೆ, "ನನ್ನಳಿಯ ಅಪ್ಪಟ ಅಪರಂಜಿ "ಅಂತ. ಅದೆಷ್ಟು ಖುಷಿ ಆಗುತ್ತೆ ಗೊತ್ತಾ...:-)

                         ಮೌನಸ್ವರದ ಸಾಹಿತ್ಯಕೆ ಮುನ್ನುಡಿ ಬರೆಯಲು ಬಂದ ನಿನ್ನೊಂದಿಗೆ ಸಪ್ತ ಸ್ವರವ ಹಾಡುವಾಸೆ ನಂದಾಗಿತ್ತು... ನನ್ನ ಭಾವನೆಗಳಿಗೆ ಪ್ರತಿ ಭಾವವನ್ನು ನಿನ್ನ ಕಣ್ಣುಗಳಲ್ಲಿ ನೋಡುವಾಸೆ ನನಗೆ, ಎಲ್ಲಾ ಹುಡುಗಿಯರಂತೆ ನಂಗೂ ರಾಶಿ ರಾಶಿ ಅಸೆಗಳಿತ್ತು... ನನ್ನ ಜೀವನ ಸಾರಥಿಯಾಗಿ ಬರುವವನು ನನ್ನನ್ನ ತುಂಬಾ ಪ್ರೀತಿಸಬೇಕು ಹಾಗೆ ಹೀಗೆ ಅಂತೆಲ್ಲಾ. ಆ ಸೂರ್ಯ ತನ್ನ ಕೆಲಸ ಮುಗಿಸಿ ಮರಳುವ ಆ ಮುಸ್ಸಂಜೆಯ ಹೊತ್ತಲ್ಲಿ ಸಮುದ್ರದ ದಂಡೆಯ ಮೇಲೆ ಸಾಗಿದಷ್ಟು ದೂರ ದೂರ ಸಾಗುವ ಅದರ ಅಂತ್ಯದವರೆಗೆ ಅವನೊಂದಿಗೆ ನಡೆಯಬೇಕು... ನಾವಿಬ್ರೂ ಮಾತಾಡ್ತಾ ಮಾತಾಡ್ತಾ ದಿನಾನೆ ಮುಗುದ್ರು ಮಾತು ಮಾತ್ರ ಮುಗಿಲೇ ಬಾರದು... ಜಗತ್ತೇ ಬೇಡ ಅನ್ನಿಸಿದಾಗ ಅವನ ತೋಳಿನಾಸರೆ ಎಲ್ಲದನ್ನೂ ಮರೆಸಬೇಕು ಅನ್ನೋ ನನ್ನ ಕನಸಿಗೆಲ್ಲಾ ಆ ದೇವರು ಉತ್ತರವಾಗಿ ನಿನ್ನ ಕೊಟ್ಟಿದ್ದ... It was 21st April 2013. ಆ ದಿನ ಹೇಗೆ ಮರೆಯಲಿ ಹೇಳು?


                         ನೆನಪಿದೆಯಾ ಆಕಾಶ್, ನೀ ನನಗೆ ನಾ ನಿನಗೆ ಅಂತಿದ್ದ ಮದುವೆಯಾದ ಆನಂತರದ ನಮ್ಮ ದಿನಗಳು...ನೀನು ನನ್ನ life ಗೆ ಬಂದ ಮೇಲೆ ಜೀವನ ಎಷ್ಟು ಚೆಂದ ಇತ್ತು ಗೊತ್ತಾ? ನನ್ನ ಪ್ರತಿ ಕಷ್ಟ ಸುಖದಲ್ಲೂ ನೀ ಜೊತೆಗಿದ್ದೆ. ಸಂಜೆ ಇಬ್ಬರೂ ಸೇರಿ ಇದೇ Balcony ನಲ್ಲಿ ಕೂತು ಸೂರ್ಯಾಸ್ತ ನೋಡುತ್ತಾ Coffee ಕುಡಿತಾ ಆ ದಿನದ update ಕೊಡ್ತಾ ಇದ್ವಿ. ಮನೆಗೆಲಸದಲ್ಲೂ 50% ನೀನು share ಮಾಡ್ತಾ ಇದ್ದೆ. ಯಾವತ್ತೋ ಒಂದಿನ ನಂಗೆ office ನಿಂದ late ಆದಾಗ auto ನಲ್ಲಿ ಎಲ್ಲಾ ಬರಬೇಡ, ನಾನೇ ಬಂದು pick ಮಾಡ್ತೀನಿ ಅಂತ ನೀನು ಸಾವಿರ ಸಲ call ಮಾಡಿ ಹೇಳ್ತಾ ಇದ್ದಿದ್ದು ನೆನಪಿದೆಯಾ? ಮನೆಯಲ್ಲಿ ನೀನು late night ಕೆಲಸ ಮಾಡ್ತಾ ಕೂತಿದ್ದಾಗ ನಾನು ಬಿಟ್ಟೂ ಬಿಡದೆ ನಿನ್ನನ್ನ ಮಾತಾಡಿಸ್ತಾ ಇದ್ರೆ, ಪಾಪ ನೀನು, ವಿಧಿ ಇಲ್ಲದವನಂತೆ ನನ್ನೊಂದಿಗೆ ಮಾತಾಡೋಕೆ start ಮಾಡ್ತಾ ಇದ್ದೆ. ಅದ್ಯಾರೋ ನಿನ್ನ colleague ಸ್ವಾತಿ ಇದಾಳಲ್ಲಾ ಸುರ ಸುಂದರಾಂಗಿ, ನೀನು ಬೇಕಂತಾನೇ ಅವಳ ಬಗ್ಗೆ ಹೇಳ್ತಾ ಇದ್ರೆ ನಂಗೆ ಅದೆಷ್ಟು ಉರಿತಾ ಇತ್ತು ಗೊತ್ತಾ ... ನಮ್ಮಿಬ್ರಲ್ಲಿ ಯಾರೇ ಜಗಳ ಆಡಿದರೂ ಪಾಪ ನೀನೇ sorry ಕೇಳ್ತಾ ಇದ್ದೆ... ನನಗೆ ಅಮ್ಮನ ನೆನಪಾಗಿ ಬಿಕ್ಕಿ ಬಿಕ್ಕಿ ಅಳುತಿದ್ದರೆ ನೀನು ಪುಟ್ಟ ಮಗುವಿನಂತೆ ನನ್ನನ್ನ ಸಮಾಧಾನಿಸುತ್ತಾ ಇದ್ದೆ...!


                        ಆದರೆ ಆ ದಿನಗಳೆಲ್ಲ ಅದೆಷ್ಟು ಬೇಗ ನೆನಪುಗಳಾಗಿ ಹೋಯ್ತಲ್ವಾ? ನೀನಂತೂ ಇತ್ತೀಚಿಗೆ ಮನೆಯಲ್ಲಿರೋ ದಿನಗಳೇ ಕಡಿಮೆ ಆಗಿದೆ. ಯಾವಾಗ್ಲೂ office tension ನಲ್ಲೇ ಇರುತ್ತೀಯ. ಈ ಬಡಪಾಯಿ ಹೆಂಡತೀನ ವಿಚಾರಿಸಿಕೊಳ್ಳೋಕೆ ನಿಂಗೆ time ಹೇ ಇಲ್ಲ ಅಲ್ವಾ..? ಸಿಗೋ ಒಂದು Sunday ನು ಅದೇನೊ office party ಅಂತ ಕಳಿತೀಯ. ಕೆಲಸ ಅಂತ ನೀನು foreign trip ಹೋದಾಗ್ಲಂತೂ ಅದೆಷ್ಟು miss ಮಾಡ್ಕೊತೀನಿ ಗೊತ್ತಾ... ನೀನೇನೋ ಕೆಲಸ ಅಂತ busy ಆಗೋಗ್ತೀಯ but ನಂಗೆ ನೀನಿಲ್ಲದೆ ತುಂಬಾ lonely feel ಆಗುತ್ತೆ...:-( ಅಡುಗೆ ಮನೆಗೆ ಹೋದರೆ ಮುಂಚೆ ನೀನು ನಂಗೆ ಅಡುಗೇನೇ ಮಾಡಕ್ಕೆ ಕೊಡದೆ ಗೋಳ್ಹೋಯ್ಕೊಳ್ತಾ ಇದ್ದಿದ್ದು ನೆನಪಾಗುತ್ತೆ. ಯಾಕೋ ಬೇಜಾರು ಅಂತ ನಾವಿಬ್ರು ಮಾಡಿಟ್ಟ ಆ ಪುಟ್ಟ library ಗೆ ಹೋದ್ರೆ ನಾನು ಒಂದೊಂದೇ ಪುಸ್ತಕದ ಕಥೆ ನಿನಗೆ ಹೇಳ್ತಾ ಇದ್ದಿದ್ದು ಮತ್ತೆ ಮತ್ತೆ ಕಾಡುತ್ತೆ... ಬರೀ ನಿನ್ನ ನೆನಪುಗಳೊಂದಿಗೇ ದಿನ'ಕಳೆಯೋಕೆ ಆಗ್ತಾ ಇಲ್ವೊ. ಅದೇಕೊ ಗೊತ್ತಿಲ್ಲ ನೀನಿಲ್ಲದ ಆ ಒಂಟಿತನದಲ್ಲಿ ಅಮ್ಮಾ ತುಂಬಾನೇ ನೆನಪಾಗ್ತಾಳೆ... :-(


                        ಯಾಕೋ ಹೀಗಾಗಿದ್ದೀಯ ಆಕಾಶ್? ನಂಗೆ ಅಂತ ಇರೋನು ನೀನೊಬ್ಬನೇ ಕಣೋ. ಅದೇನೇ ಇರಲಿ, ಯಾವುದೇ ವಿಷಯ ಇರಲಿ, ನಿನ್ನ ಹತ್ತಿರ share ಮಾಡಿಕೊಂಡರೆ ಸಮಾಧಾನ. ನಂಗೆ ಗೊತ್ತು ಕಣೋ ನೀನು ಬೇಕಂತ ಹೀಗೆ ಮಾಡ್ತಾ ಇಲ್ಲ ಅಂತ. ಮೋಡದ ಮರೆ ಸೇರಿರುವ ಆ ಚಂದಿರನಿಂದ ಇವತ್ತು ಎಲ್ಲಾ ಕಡೆ ಬರೀ ಕತ್ತಲು ತುಂಬಿದೆ. Actuallyಈ ಕತ್ತಲು ನಂಗೆ ತುಂಬಾ ಭಯ ಹುಟ್ಟಿಸ್ತಿದೆ. ಈ ಕತ್ತಲು ತುಂಬಾ ಹೊತ್ತು ಇರೋಲ್ಲಾ ಅಲ್ವಾ? ಅದೇನೇ ಇರಲಿ ಆ ಕಗ್ಗತ್ತಲನ್ನು ಭೇದಿಸಿ ಮತ್ತೆ ಬರುವನಂತೆ ಆ ಚಂದಿರ please come back to me soon ಆಕಾಶ್... Hmmm ನಂಗೊತ್ತು ನೀನು Party ಮುಗಿಸಿ ಬಂದು ಅದೆಷ್ಟು tired ಆಗಿರ್ತೀಯ, ಅಲ್ವಾ? ಇವತ್ತು ನನ್ನ Birthday ಕಣೋ idiot. ನೀನೇ first wish ಮಾಡ್ತಿಯ ಅಂದ್ಕೊಂಡಿದ್ದೆ... ದಿನವಿಡೀ ನೀ call ಮಾಡ್ತೀಯ ಅಂತ ಅದೆಷ್ಟು wait ಮಾಡಿದೆ ಗೊತ್ತಾ? Hmmm but its okay ಇನ್ನೂ time ಮೀರಿಲ್ಲ... atleast ಈಗಲಾದ್ರು wish ಮಾಡೋ ....!!!


                                                                                                                 ಪ್ರೀತಿಯಿಂದ,

                                                                                                                     ಭೂಮಿ


                         ಆ ಪತ್ರ ಓದಿ ಮುಗಿಸಿದಂತೆ ಆಕಾಶ್ ನ ಕಣ್ಣಿನಿಂದ ಹನಿಯೊಂದು ಜಾರಿ ಆ ಪತ್ರದ ಮೇಲೆ ಬಿತ್ತು. ಆಕಾಶ್ ಗೆ ತನ್ನ ಮೇಲೇನೇ ಕೋಪ ಬಂತು. ಒಂದು ಕ್ಷಣ ಏನು ಮಾಡಲು ತೋಚದೆ ತನ್ನ ಹೆಂಡತಿಯ ಕಡೆ ತಿರುಗಿದ. "ತನ್ನ ಪ್ರೀತಿಯ ಭೂಮಿಯ ಹುಟ್ಟಿದ ಹಬ್ಬ ಮರೆಯೋ ಅಷ್ಟು busy ಆಗಿದ್ದೀನಾ ?" ಅಂತ ತನ್ನಲ್ಲೇ ಕೇಳಿಕೊಂಡ ಆಕಾಶ್ . Maybe, it was time for him to change his PRIORITY LIST. ಭೂಮಿ ಆಗ ತಾನೇ ನಿದ್ದೆಯಲ್ಲಿ ಮಗ್ಗುಲು ಬದಲಿಸಿದ್ದಳು. ಅವಳು ಮಲಗಿದ್ದ ದಿಂಬು ಸಹ ಅವಳ ಕಣ್ಣೀರಿಗೆ ಸಾಥ್ ಕೊಟ್ಟಿತ್ತು. ಇತ್ತ ಗಂಟೆ 11.55 ತೋರಿಸುತ್ತಾ ಇತ್ತು. ತಕ್ಷಣ ಅದೇನೋ ಹೊಳೆದಂತಾಗಿ ಆಕಾಶ್ ಆ room ನ Bedlight off ಮಾಡಿ dining hall ನತ್ತ ಹೊರಟ...


                         ಗಂಟೆ 11.57 ಆಗಿತ್ತು . "ಭೂಮಿ , 2 minutes ಎದ್ದೇಳು ಪ್ಲೀಸ್ ... ನನಗೋಸ್ಕರ ಪ್ಲೀಸ್ " ಎಂಬ ದನಿಗೆ ಭೂಮಿ ಯಾವುದೋ ಕನಸಿಂದ ಎಚ್ಚರಗೊಳ್ಳುವಂತೆ ಎದ್ದು ಕುಳಿತಳು . ಕಣ್ಣು ಬಿಟ್ಟಾಗ ಅವಳ ಮುಂದೆ ಆಕಾಶ್ , ಹಾಗು ಅವನ ಕೈಲೊಂದು ಪುಟ್ಟ Candle. ಸಂಪೂರ್ಣ ಕತ್ತಲಿಂದ ಕೂಡಿದ್ದ ಆ room ನ ಆ ಬೆಳಕಿನಲ್ಲಿ ಅವಳಿಗೆ ಕಂಡದ್ದು ಆಕಾಶ್ ನ ಮುಖ ಮಾತ್ರ. ಭೂಮಿಯ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ , "ಭೂಮಿ, ನಿನಗೆ ತುಂಬಾ ಬೇಜಾರ್ ಮಾಡಿದೆ ಅಲ್ವಾ? I am really Sorry ... ತಪ್ಪು ನನ್ನದೇ . ಇನ್ನು ಯಾವತ್ತೂ ಈ ಕತ್ತಲೆಗೆ ನಿನ್ನ ಭಯ ಪಡಿಸೋಕೆ ನಾನು ಬಿಡೋಲ್ಲ . ಈ ಬೆಳಕಿನಂತೆ ಯಾವಾಗಲು ನಿನಗೆ ಶಕ್ತಿಯಾಗಿ , ಸ್ಪೂರ್ತಿಯಾಗಿ ನಿನ್ನ ಜೊತೇಲೆ ಇರ್ತೀನಿ. Many many Happy returns of the Day, Bhoomi. I Love you so much ...!!!" ಅಂತ ಹೇಳಿದಾಗ ಭೂಮಿಯ ಕಣ್ಣು ತುಂಬಿ ಬಂದಿತ್ತು. ಆ ರಾತ್ರಿ ಅವರಿಬ್ಬರೂ ತುಂಬಾ ಹೊತ್ತು ಮಾತನಾಡುತ್ತಾ ಕುಳಿತಿದ್ದರು. ಭೂಮಿಯ 'THE BEST BIRTHDAY' ಅದಾಗಿತ್ತು. ಅವರಿಬ್ಬರು ಮಾತಾಡುತ್ತಾ ಮಾತಾಡುತ್ತಾ ಹಾಗೇ ನಿದ್ದೆಗೆ ಜಾರಿದರೂ, ಆ candle ಮಾತ್ರ ಉರಿಯುತ್ತಲೇ ಇತ್ತು.

                       ಎಷ್ಟೋ ಸಲ ನಾವು ತುಂಬಾ ಪ್ರೀತಿಸುವವರಿಗೆ , ನಮ್ಮ ಪ್ರೀತಿನಾ ಹೇಳ್ಕೋಬೇಕು ಅಂತ ಅನ್ನಿಸಿದರೂ, ಬಿಡು ಮತ್ತೆ ಯಾವಾಗ್ಲಾದ್ರು ಹೇಳಿದರೆ ಆಯ್ತು  ಅಂತ ಸುಮ್ಮನಾಗಿ ಬಿಡ್ತೀವಿ ... ಇನ್ನೂ ಕೆಲವೊಮ್ಮೆ ನಮ್ಮನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವವರು ಜೊತೆಗೆ ಇದ್ದರೂನು ಅವರ ಪ್ರೀತಿ ಅರ್ಥನೇ  ಆಗೋಲ್ಲ. We just take them for granted ಅಲ್ವಾ? ಕಾಡೋ ನೆನಪುಗಳು, ಕೂಡಿಟ್ಟ ಕನಸುಗಳು, ಕೊನೆಗೆ ಬಚ್ಚಿಟ್ಟ ಪ್ರೀತಿ ಇದೆಲ್ಲದಕ್ಕೂ ಉತ್ತರ ಸಿಗೋದು ಮೌನ ಮಾತಾದಾಗ... ಕೆಲವೊಮ್ಮೆ ಮಾತಿನಲ್ಲಿ ಹೇಳೋಕಾಗದ ಎಷ್ಟೋ ಭಾವನೆಗಳಿಗೆ ಪದಗಳು ಬಣ್ಣ ನೀಡಿರುತ್ತೆ.  ಒಂದು ಸಣ್ಣ ಪತ್ರ ಎಷ್ಟೋ ಮುನಿಸುಗಳಿಗೆ ತೆರೆ ಎಳೆದು, ಎರಡು 
ಮನಸುಗಳನ್ನು ಬೆಸೆದಿರುತ್ತೆ.  Maybe, ಆ ಪ್ರೀತಿನ carry ಮಾಡಬಲ್ಲ ಶಕ್ತಿ ಇರೋ Strong Carrier ಅಂದ್ರೆ ಅದು ಪದಗಳು ಮಾತ್ರ.   
 
                     ಅಂತು ಪ್ರೀತಿಯ ಕಡಲಲ್ಲಿ ಆಕಾಶ್ ಮತ್ತು ಭೂಮಿ ಮತ್ತೆ ಒಂದಾದರು.ಅವಳು ಭೂಮಿ, ಅವನು ಆಕಾಶ , ಅವರಿಬ್ಬರ ಪ್ರೀತಿ ಮಾತ್ರ ದಿಗಂತದಾಚೆಗೂ ಮೀರಿತ್ತು...!! 

                                                                                                            -ಮೇದಿನಿ .ಎಂ .ಭಟ್