Friday 2 January 2015

Nannade Goodinalli Naa...!!!


ನನ್ನದೇ ಗೂಡಿನಲ್ಲಿ ನಾ...!!!             
      
                                              Creative Designing: Raghavendra.G.Yadav

                            ಮನೆಯ ಮುಂದೆ ರಂಗೋಲಿಯಿಂದ ಚುಕ್ಕಿಗಳನ್ನ ಸೇರಿಸುತ್ತಿದ್ದ ಚಿಂತನಾಳ ಮನದ ಮುಗಿಲಲ್ಲಿ ಸಂಭ್ರಮವು ರಂಗೇರುತ್ತಾ ಇದ್ದಿದ್ದು ಅವಳ ಮುಖ ಭಾವದಿಂದ ಸ್ಪಷ್ಟವಾಗಿ ನನಗೆ ಗೊತ್ತಾಗ್ತಾ ಇತ್ತು.

                           "Hey ಚಿಂತು ಚುಕ್ಕಿ ತಪ್ಪಿದ್ಯಲ್ಲೇ , ಅಪರೂಪಕ್ಕೆ ಕೆಲಸ ಮಾಡೋ ಹುಡ್ಗೀರ ಹಣೆಬರಹಾನೇ ಇಷ್ಟು ನೋಡು . ನಿನ್ನ ಕಟ್ಟಿಕೊಳ್ಳೋ ಆ ಪುಣ್ಯಾತ್ಮ ಅದೇನ್ ಕರ್ಮ ಮಾಡಿದಾನೋ..." ಹಿಂದಿನಿಂದ ಬಂದ ನನ್ನ ದ್ವನಿಗೆ ತಬ್ಬಿಬ್ಬಾಗಿ ಚಿಂತನಾಳ ಕೈಲಿದ್ದ ರಂಗೋಲಿ ಡಬ್ಬ ನೆಲ ಸೇರಿತ್ತು. ಹಿಂದೆ ತಿರುಗಿ ನೋಡಿದ್ರೆ ಅಲ್ಲಿ ನಾನು ನಿಂತಿದ್ದೆ. "Hey ಅಣ್ಣಾ ನೀನು... ಏನೋ Hostel ನಿಂದ ಬರ್ತೀನಿ ಅಂತ ಹೇಳಲೇ ಇಲ್ಲಾ. What a Surprise!" ಚಿಂತನಾ ಖುಷಿಯಲ್ಲಿ ಕುಣಿಯೋದೊಂದೇ ಬಾಕಿ ಇತ್ತು. "ಏನೋ ನಿಮ್ಮನ್ನೆಲ್ಲಾ ನೋಡ್ಬೇಕು ಅನ್ನಿಸ್ತು. ಅದಕ್ಕೆ ಬಂದು ಬಿಟ್ಟೆ" ಅಂದೆ ಕಟ್ಟೆಯ ಮೇಲೆ ಕುಳಿತು shoes ಬಿಚ್ಚುತ್ತಾ. "ಇರು ಅಮ್ಮಂಗೆ ಹೇಳ್ತೀನಿ.. ಎಷ್ಟು ಖುಷಿ ಪಡ್ತಾಳೆ ಗೊತ್ತಾ" ಅಂತ ಹೇಳ್ತಾ ಅಮ್ಮನ್ನನ್ನ ಕರೆಯುತ್ತಾ ಒಳಗೋಡಿದಳು ಚಿಂತನಾ.

                           ಕೆಲಸದ ಜಂಜಾಟದಿಂದ ಬೇಸತ್ತಿದ್ದ ಮನಸ್ಸಿಗೀಗ weekend ಎಂಬ ಖುಷಿಯ ಜೊತೆಗೆ, ಮತ್ತೆ ಗೂಡು ಸೇರಿರುವ ಸಂಭ್ರಮ. ಅದ್ಯಾಕೋ ಈ Weekend ನನಗೆ ತುಂಬಾ ಖುಷಿ ಕೊಡುತ್ತೆ ಅಂತ ಮನಸ್ಸು ಹೇಳ್ತಾ ಇತ್ತು. ನಮ್ಮ ಮನೆಯನ್ನು ಕಂಡ ಖುಷಿಯಲ್ಲಿ ಆ 12 ಗಂಟೆಗಳ journeyಯ ಸುಸ್ತು ಕೂಡ ಮರೆತುಹೋಗಿತ್ತು. "ಚಿರಂತ್ ಹೇಗಿದ್ದೀಯ?" ಅಮ್ಮ ಖುಷಿ ಇಂದ ಹೊರಗೋಡಿ ಬಂದಳು. ಸದ್ದು ಕೇಳಿ ಅಜ್ಜ-ಅಜ್ಜಿ ಕೂಡ ಹೊರಗೆ ಬಂದರು. ಅಜ್ಜ ಕೈಲಿದ್ದ Luggage ನ ನಾನು ಬೇಡ ಅಂದ್ರೂ ಒಳಗಡೆ ತಗೊಂಡು ಹೋದರು. ದೇವರ ಮನೆಯಿಂದ ಘಂಟೆ ಸದ್ದು ಕೇಳಿ, ಅಪ್ಪ ದೇವರ ಮನೆ ಮುಂದೆ ಪ್ರತಿಷ್ಟಾಪಿತರಾಗಿದ್ದರೆ ಅಂತ ಅಂದುಕೊಂಡೆ. 

                            ನಾನು ಅಮ್ಮ, ಅಜ್ಜ-ಅಜ್ಜಿ  ಎಲ್ಲರನ್ನು ಮಾತಾಡಿಸಿ  fresh up ಆಗೋ ಅಷ್ಟರಲ್ಲಿ  ತಟ್ಟೆಯಲ್ಲಿ ನನ್ನ favourite ನೀರ್ ದೋಸೆ ready ಇತ್ತು. ಚಿಂತನಾ ತನ್ನ ಪುಟಾಣಿ ತಟ್ಟೆ ಹಿಡಿದು ಎರಡನೇ ದೋಸೆಗಾಗಿ ಕಾಯ್ತಾ  ಇದ್ಲು. ಅವಳಿಗೆ ಚಿಕ್ಕಂದಿನಿಂದ  ಆ ತಟ್ಟೆಯಲ್ಲೇ ತಿಂದು ಅಭ್ಯಾಸ. ಅದೇನೋ ಬೇರೆದರಲ್ಲಿ ತಿಂದರೆ ಹೊಟ್ಟೆ ತುಂಬೋದಿಲ್ಲ ಅನ್ಸುತ್ತೆ. ಸಖತ್ sentimental ಹುಡುಗಿ, ನನಗೆ completely opposite ಅವಳು. ಅಪ್ಪ-ಅಮ್ಮ ನಮ್ಮಿಬ್ಬರಿಗೆ "ಚಿರಂತ್-ಚಿಂತನಾ"  ಹೆಸರು ಮ್ಯಾಚ್ ಆಗುತ್ತಲ್ಲಾ ಅಂತ ಹೆಸರಿಟ್ಟರು. ಆದರೆ ಹೆಸರೊಂದು ಬಿಟ್ಟು ನಾವಿಬ್ರು ಇನ್ಯಾವುದರಲ್ಲೂ match ಆಗ್ತಿರಲಿಲ್ಲ :-P  ಈಗಲೂ ಅಷ್ಟೇ, ಏನೋ ರೇಗಿಸೋದರಲ್ಲಿ ಇದ್ದೆ. ಆದ್ರೆ ಆಗ ತಾನೇ ಪೂಜೆ ಮುಗಿಸಿ ತಿಂಡಿಗೆ ಬಂದ ಅಪ್ಪನನ್ನು ನೋಡಿ  ಹಾಗೆ ಸುಮ್ಮನಾಗಿ ಬಿಟ್ಟೆ. ಯಾಕಂದ್ರೆ  ನಾನು ಚಿಂತೂ ಜಗಳ start ಮಾಡಿದ್ರೆ ಅಪ್ಪ ಯಾವಾಗಲೂ ಅವಳ party. ಅಪ್ಪ ಮಾತ್ರ ಯಾಕೆ, ಮನೆಯವರೆಲ್ಲರೂ ಅವಳಿಗೇ support. ಕೊನೆಗೆ ನನ್ನ ಕಡೆ ಅಂತ ಬರೋದು ಅಮ್ಮ ಮಾತ್ರ. ಏನೇ ಅಂದ್ರು ಅಮ್ಮಂದಿರಿಗೆ ಮಗ ಅಂದ್ರೆ ಸ್ವಲ್ಪ ಹೆಚ್ಚೇ ಪ್ರೀತಿ ಅಲ್ವಾ?

                           "ಹೇಗಿದ್ದೀಯಾ ಚಿರು... ಕೆಲಸ ಹೇಗಿದೆ? ಹಾಸ್ಟೆಲ್ ನಲ್ಲಿ ಎಲ್ಲಾ okay ತಾನೇ?" ಅಪ್ಪ ಒಂದೇ ಉಸಿರಿನಲ್ಲಿ ಕೇಳಿದರು. ಏನಿದು ಕೆಲಸಕ್ಕೆ ಅಂತ Pune ಸೇರಿದ ಮೇಲೆ ನಾವು ಕರೆದರೂ ಊರಿಗೆ ಬರೋದನ್ನ ಕಡಿಮೆ ಮಾಡಿದ್ದ  ಮಗ ಹೀಗೆ sudden ಆಗಿ ಬಂದಿದ್ದಾನಲ್ಲ ಅನ್ನೋ ಆಶ್ಚರ್ಯ ಅಪ್ಪನ ಮುಖದಲ್ಲಿ ಕಾಣ್ತಿದ್ರೂ ಅದನ್ನು ಮಾತಲ್ಲಿ ಮರೆಮಾಚಿದ್ದು ನನಗೆ ಅರ್ಥ ಅಯ್ತು.  "ಹೂ ಅಪ್ಪ. ಎಲ್ಲಾ ಚೆನ್ನಾಗಿ ನಡಿತಾ ಇದೆ. ನಿನ್ನ ಆರೋಗ್ಯ ಹೇಗಿದೆ?" ಅಂತ ಕೇಳಿದೆ. ಅಪ್ಪಾ ಏನೋ ಹೇಳೋದ್ರಲ್ಲಿ ಇದ್ರು. ಅಷ್ಟರಲ್ಲಿ ಯಾವುದೋ phone ಬಂತು ಅಂತ ಹೊರಗೆ ಹೋದರು.

                              ಅಪ್ಪ ಒಂಥರಾ ನನ್ನ lifeನಲ್ಲಿ ನಾನು ನೋಡಿದ "Special Person." ನಾವೇನೇ ಕೇಳಿದ್ರೂ ಇಲ್ಲ ಅನ್ನೋಲ್ಲ. In fact ಕೇಳೋಕ್ಕಿಂತ ಮುಂಚೆನೇ ನಮ್ಮೆಲ್ಲಾ ಭಾವನೇನಾ ಅರ್ಥ ಮಾಡಿಕೊಳ್ಳೋದು ಅಂದ್ರೆ ಅದು ಅಪ್ಪ ಮಾತ್ರ. ಚಿಕ್ಕಂದಿನಿಂದ ಅದೇನೋ ಅಭ್ಯಾಸ ಅಪ್ಪನಿಗೆ, ದಿನಪೂರ್ತಿ ಕೆಲಸ ಮಾಡಿ ಅದೆಷ್ಟು ಸುಸ್ತಾಗಿದ್ರೂ, ಸಂಜೆ ನಾನು ಚಿಂತೂ homeworks ಎಲ್ಲಾ ಮುಗಿಸಿ ಅಜ್ಜಿ ಹತ್ರ ಕಥೆ ಕೇಳಿ ಮಲಗೋವರೆಗೂ ನಮ್ಮ ಜೊತೇನೆ ಕಾಲ ಕಳಿತಾರೆ. ನಂಗೆ ಅಥವಾ ಚಿಂತುಗೆ ಹುಷಾರಿಲ್ಲ ಅಂದಾಗ, ಇಡೀ ರಾತ್ರಿ ನಿದ್ದೆ ಬಿಟ್ಟು ನಮ್ಮನ್ನು ನೋಡಿಕೊಂಡಿದ್ದ ಆ ದಿನಗಳು ನನಗೆ ಇನ್ನು ನೆನಪಿದೆ. ನಾವೇನೇ ತಪ್ಪು ಮಾಡಿದರೂ, ಮೊದಲು ಅಪ್ಪಂಗೆ ಹೇಳ್ಬೇಕಪ್ಪಾ ಅನ್ನೋ ಅಷ್ಟು ಆತ್ಮೀಯ. ನಾನು P.U.C ನಲ್ಲಿ Just Pass ಆದಾಗಲೂ ಏನೂ ಬೈಯದೇ, ಯಾರ್ಯಾರದೋ Success Story ಹೇಳಿ ನನ್ನ ಹುರಿದುಂಬಿಸಿದ್ದರು. "Success is not Final, Failure is not Fatal" ಅಂತ ಅಪ್ಪಾ ಹೇಳಿದ್ದ ಮಾತು ಇನ್ನೂ ನನಗೆ ನೆನಪಿದೆ. ಮೊನ್ನೆ ಮೊನ್ನೆ ನನ್ನ First Love Break Up ಆದಾಗ ಏನೋ ಕಳೆದುಕೊಂಡವನಂತೆ  ಮಂಕಾಗಿದ್ದಾಗಲೂ ಸಹ ನನ್ನ ಜೊತೆ ಇದ್ದಿದ್ದು ಇದೆ ಅಪ್ಪಾನೇ. Recent ಆಗಿ ಯಾರಿಗೂ ಹೇಳದೆ ಹೋಗಿ attend ಮಾಡಿ ಬಂದಿದ್ದ interview ನಲ್ಲಿ select ಆದಾಗ ಖುಷಿ ಇಂದ ಅಪ್ಪನಿಗೇ  first ಹೇಳೋಕೆ ಮನೆಗೆ ಬಂದ್ರೆ ಅಪ್ಪ ಇನ್ನೂ ಕೆಲಸದಿಂದ ಬಂದಿರಲಿಲ್ಲ. ಮನೆಯವರ ಹತ್ತಿರ ನಿಮಗೆಲ್ಲಾ ಒಂದು surprise ಇದೆ ಅಂತ ಆ ವಿಷಯಾನ ಯಾರಿಗೂ ಹೇಳದೆ ಆಟ ಆಡಿಸ್ತಾ ಇದ್ದಾಗ ನನ್ನ ಬಾಯಿ ಬಿಡಿಸೋಕೆ ಅಜ್ಜ ಏನೇನೋ ನಾಟಕ ಮಾಡಿದ್ರು. ಅಪ್ಪ ಬಂದಮೇಲೆ ಎಲ್ಲರನ್ನು ಕೂರಿಸಿಕೊಂಡು ನನ್ನ job ಬಗ್ಗೆ ಹೇಳಿದ್ರೆ ಎಲ್ಲರೂ ಖುಷಿಯಿಂದ ಹಿಗ್ಗಿ ಬಿಟ್ರು. ಅಮ್ಮ, "ನಿಂಗೆ ನಿಮ್ಮಪ್ಪಾನೆ ಹೆಚ್ಚು ಕಣೋ. ನಾವೆಲ್ಲಾ ಲೆಕ್ಕಾನೆ ಇಲ್ಲ ಅಲ್ವಾ?" ಅಂತ ಮನಸಲ್ಲಿ ಅದೆಷ್ಟೇ ಖುಷಿ ಇದ್ದರೂ ಮುನಿಸಿಕೊಂಡವಳಂತೆ ಅಡುಗೆ ಮಾಡೋಕೆ ಅಂತ ಎದ್ದು ಹೋದಳು.

                                 Hmmm... ಅಮ್ಮನ ಬಗ್ಗೆ ಏನ್ ಹೇಳಲಿ? ಆಕೆ ಒಂಥರಾ ಮಹಾ ತಾಯಿ. ನಾನಂದ್ರೆ ಪಂಚಪ್ರಾಣ. ಅದೆಷ್ಟೋ ದೇವರಿಗೆ ಹರಕೆ ಹೊತ್ತ ಮೇಲೆ ನಾನು ಹುಟ್ಟಿದ್ದಂತೆ , ಅಜ್ಜ ಯಾವಾಗಲು ಹೇಳ್ತಾ ಇರ್ತಾರೆ. ಅಮ್ಮ ನಮಗ್ಯಾರಿಗಾದ್ರೂ ಬುದ್ಧಿವಾದ ಹೇಳೋಕೆ ಬಂದ್ರೆ "ಬಿಡಮ್ಮಾ, 10th Standard fail ಅಂತೀಯ, ನಿಮ್ಮ High School ನಲ್ಲಿ ಇದೆಲ್ಲಾ ಹೇಳಿ ಕೊಟ್ಟಿದ್ದಾರಾ?" ಅಂತ ಎಲ್ಲರೂ ಛೇಡಿಸ್ತೀವಿ. ಪಾಪ , ದಿನಕ್ಕೊಂದೇ serial ನೋಡ್ತೀನಿ ಅಂತ TV ಮುಂದೆ ಬಂದು ಕೂತರೆ ಸಾಕು, ನಾನು, ಚಿಂತೂ ಹಾಗು ಅಪ್ಪ ಸೇರಿ remote ಗೆ ಕಿತ್ತಾಡಿ channels change ಮಾಡ್ತಾ ಇದ್ರೆ, 1/2 ಗಂಟೆಯಲ್ಲಿ 150 channel programs ನೋಡಿರ್ತೀವಿ. ಪಾಪ ಅಮ್ಮ ನಮ್ಮ ಗಲಾಟೆ ತಡ್ಕೊಳೋಕಾಗದೆ, ಕೊನೆಗೆ ಅಜ್ಜಿ ಜೊತೆ ಅದ್ಯಾವುದೋ ಭಗವದ್ಗೀತೆ ಅಧ್ಯಾಯ ಓದ್ತೀನಿ ಅಂತ ಹೋಗಿ ಕೂತ್ಕೋತಾಳೆ :-P  ನಮ್ಮ ಅಜ್ಜಿ ಏನು ಕಮ್ಮಿ ನಾ? Typical ಅಜ್ಜಿ ಅವರು. ಚಿಂತೂ ಏನಾದ್ರು ಅವಳ sleeveless top ಹಾಕಿಕೊಂಡು "ಅಜ್ಜಿ, ಹೇಗಿದೆ ನೋಡು?" ಅಂತ ಕೇಳಿದ್ರೆ, "ಅಯ್ಯೋ ರಾಮ!! ಏನೇ ಇದು ನಿನ್ನ ಅವತಾರ? ನಮ್ಮ ಕಾಲದಲ್ಲಿ ಹೀಗೆಲ್ಲಾ ಇರಲಿಲ್ಲಪ್ಪಾ" ಅಂತ ಒಂದಿಷ್ಟು ವೇದಾಂತ ಹೇಳಿ ಕಳಿಸ್ತಾರೆ.

                                 ಮುದ್ದು ಮಾಡಿದಷ್ಟು ಮುದ್ದು ತರಿಸೋ ಮುದ್ದು ತಂಗಿ, ಪ್ರೀತಿಯಿಂದ ಗದರಿಸುವ ಅಮ್ಮ, ಗಾಂಭೀರ್ಯತೆಯ ಪ್ರತೀಕದಂತಿರುವ ಅಪ್ಪ, ಸದಾ ಅಜ್ಜನ ಹೆಸರು ಹೇಳಿ joke ಮಾಡುವ ಅಜ್ಜಿ, ಅಜ್ಜಿ ಹೇಳಿದ್ದಕ್ಕೆಲ್ಲಾ "ಹೀ..." ಎಂದು ನಗುವ ಅಜ್ಜ... ಪುಟಾಣಿ ಸಂಸಾರಕ್ಕೆ ದೃಷ್ಟಿಬೊಟ್ಟು ಇಡಬೇಕು ಅನ್ನುವಷ್ಟು ಪ್ರೀತಿ... ಜೀವನದಲ್ಲಿ ಎಲ್ಲಾ ಕಳೆದುಕೊಂಡು ಶೂನ್ಯನಾಗಿದ್ದೀನಿ ಅನ್ನೋ time ನಲ್ಲಿ ಹೆಗಲಿಗೆ ಹೆಗಲು ಕೊಟ್ಟು "ನಾವಿದ್ದೀವಿ" ಅಂತ ಅವರುಗಳು ಕೊಡೋ ಸಾಂತ್ವನ... ಯಾವುದೋ ಹಬ್ಬ ಬಂತೆಂದರೆ ಎಲ್ಲಾ ಕೂಡಿ ತಯಾರಿ ಮಾಡೋ ಆ ಸಂಭ್ರಮ... ಹುಣ್ಣಿಮೆ ಬಂದ್ರೆ ಸಾಕು ಮನೆಮಂದಿ ಎಲ್ಲಾ ಅಂಗಳದಲ್ಲಿ ಚಾಪೆ ಹಾಸಿ ಚಂದ್ರನನ್ನು ನೋಡ್ತಾ ನಕ್ಷತ್ರ ಎಣಿಸುತ್ತಾ ಅಜ್ಜಿಯ ಕೈತುತ್ತು ತಿನ್ನೋದ್ರಲ್ಲಿ ಸಿಗೋ ನೆಮ್ಮದಿ... ಜೊತೆಗೆ ಅಮ್ಮಾ ನುಡಿಸೋ ಆ ವೀಣೆಯ ಮಾಧುರ್ಯ... Sometimes ನಮ್ಮ teacher ಯಾವಾಗಲೋ ಹೇಳಿದ್ದ ಸ್ವರ್ಗ ನೆನಪಾಗುತ್ತೆ...!!!    

                                 ಮಾತಾಡ್ತಾ ಮಾತಾಡ್ತಾ ಒಂದ್ ದಿನ ಹೇಗೆ ಕಳಿತೋ ಗೊತ್ತಾಗಲೇ ಇಲ್ಲಾ. Saturday ಮುಗಿದೇ ಹೋಗಿತ್ತು. ಆಗ ಯಾವ ಹಬ್ಬಾನೂ ಇರಲಿಲ್ಲ.  ಆದ್ರೂ ನಮ್ಮನೇಲಿ ಮಾತ್ರ ಹಬ್ಬದ ವಾತಾವರಣ ಸೃಷ್ಟಿ ಆಗಿತ್ತು. Usually ಭಾನುವಾರ ಅಂದ್ರೆ ಅವತ್ತು ಅಮ್ಮನಿಗೆ Full Rest, ಅಡುಗೆ ಕೆಲಸ ಎಲ್ಲಾ ನಮಗೋಸ್ಕರ ಅವತ್ತು ಅಪ್ಪಾನೇ ಮಾಡ್ತಾರೆ. ಅಪ್ಪನ ಅಡುಗೆ ತಿಂದು ನಾವೆಲ್ಲಾ ಚೆನ್ನಾಗಿದೆ ಚೆನ್ನಾಗಿದೆ ಅಂತ ಹೊಗಳುತ್ತಾ ಇದ್ರೆ, ಅಮ್ಮ ಮಾತ್ರ ಅದರಲ್ಲಿ ಏನಾದ್ರೂ ತಪ್ಪು ಹುಡುಕಿ, "ಅಯ್ಯೋ ಇದರಲ್ಲೇನಿದೆ, ಇಂಗು-ತೆಂಗು ಇದ್ರೆ ಮಂಗಾನೂ ಅಡುಗೆ ಮಾಡುತ್ತೆ, ಅಂತದ್ರಲ್ಲಿ ನಿಮ್ಮಪ್ಪ ಮಾಡಿದ್ದೇನು great ಅಲ್ಲಾ ಬಿಡು" ಅಂತ ಹೇಳಿ ಮತ್ತೆ ಅದೇ ಅಡುಗೆ ತಿಂತಾರೆ :-P  ಆದರೆ ಅವತ್ತು ನಾನು ಬಂದಿದ್ದೀನಿ ಅಂತ ಅಮ್ಮ ಬೆಳಗ್ಗಿನಿಂದಲೇ ಅಡುಗೆ ಮನೆ  ಸೇರಿದ್ದಳು. "ನಿಮಗೆಲ್ಲ ಒಂದು Surprise ಇದೆ" ಅಂತ ಹೇಳಬೇಕು ಅಂತ ಒಂದು ಕಡೆ  ಮನಸ್ಸು ಎಷ್ಟೇ ತುಡಿತಾ ಇದ್ರೂ, ಆ Perfect Moment ಬರಲಿ ಅಂತ ಕಾಯ್ತಾ ಇದ್ದೆ...!

                                 Usually ಭಾನುವಾರ ನಾವ್ಯಾರೂ ಎಲ್ಲಿಗೂ ಹೋಗೋಲ್ಲ. ಎಲ್ಲರೂ ಕೂತು ಒಂದು ಸಿನಿಮಾ ನೋಡಿದ್ರೆ ಅಲ್ಲಿಗೆ ನಮ್ಮ weekend complete ಅನಿಸುತ್ತೆ. ಅವತ್ತು Zee Cinema ದಲ್ಲಿ कभी ख़ुशी कभी घम movie ನಮಗೋಸ್ಕರಾನೇ ಹಾಕಿದ್ದಾರೆ ಅನ್ನಿಸ್ತು . Movie ಮುಗಿಯುವಷ್ಟರಲ್ಲಿ ರಾತ್ರಿ 7.30 ಆಗಿತ್ತು. ಆ ರಾತ್ರಿ ಮತ್ತೆ Pune ಗೆ ಹೊರಡಲು ಮನಸ್ಸಾಗದೇ ಏನೋ ಕಾರಣ ಹೇಳಿ Team Lead ಗೆ ತಕ್ಷಣ ಸೋಮವಾರದ leave application mail ಕಳಿಸಿದ್ದೆ.  "Hey ಚಿರು, 8 ಗಂಟೆ  ಆಗ್ತಾ ಇದೆ. ಹೊರಡಲ್ವೇನೋ?.... But ಏನ್ ಗೊತ್ತಾ? ನೀನು ಇನ್ನೊಂದಿನ  ಇದ್ದಿದ್ರೆ ತುಂಬಾ ಚೆನ್ನಾಗಿರ್ತಿತ್ತು ಕಣೋ." ಅಂತ ಅಪ್ಪ ಹೇಳಿದರು. ಅಪ್ಪನ ಪ್ರಶ್ನೆಗೆ ಉತ್ತರಿಸೋ ಮೊದಲೇ ಏನೋ ನೆನಪಾದಂತಾಗಿ, "ಅಮ್ಮಾ ಒಂದು ನಿಮಿಷ ಬೇಗ ಬಾ ಇಲ್ಲಿ. ನಿಂಗೇನೋ ಹೇಳ್ಬೇಕು" ಅಂತ ಜೋರಾಗಿ ಅಮ್ಮನನ್ನು ಕೂಗಿದೆ. "ಅದೇನೋ ನಿಂದು? ಕೆಲಸ ಮಾಡೋಕೂ ಬಿಡೋಲ್ಲ. ಯಾವಾಗಲೂ ಹುಡುಗಾಟ ಆಡ್ತೀಯ..." ಅಂತ ಅಮ್ಮ ಅಡುಗೆ ಮನೆಯಿಂದ ಓಡಿ ಬಂದಳು.  "ಒಂದು ನಿಮಿಷ ಇರಿ ಎಲ್ರೂ" ಅಂತ ಹೇಳಿ ನನ್ನ room ಗೆ  ಹೋಗಿ ಅಪ್ಪ-ಅಮ್ಮಂಗೆ ಅಂತ ಹಿಂದಿನ ದಿನ ಅಷ್ಟೇ Pune ಯ ಮೂಲೆ ಮೂಲೆ ಎಲ್ಲಾ ಅಲೆದು ಪ್ರೀತಿಯಿಂದ ಆರಿಸಿ ತಂದಿದ್ದ ಬಟ್ಟೆಯನ್ನು ತಂದೆ. 

                              "ಅಪ್ಪ-ಅಮ್ಮ Wishing you a very Happy 25th Wedding Anniversary!!! ನೀವಿಬ್ರೂ ಹೀಗೆ ಯಾವಾಗಲೂ ಖುಷಿ-ಖುಷಿಯಾಗಿ ಇರಲಿ ಅಂತ ಆ ದೇವರಲ್ಲಿ ಕೇಳಿಕೊಳ್ಳುತೀನಿ." ಅಂತ  wish ಮಾಡಿದೆ. ಅದಕ್ಕೆ  ಅಪ್ಪ "ನಮ್ಮ ಮದುವೆಯ ದಿನ ನಮಗೇ ಮರೆತು ಹೋಗಿತ್ತು ಕಣೋ. ಅಬ್ಬಾ!! 25 ವರ್ಷ ಆಗೋಯ್ತಾ." ಅಂದ್ರು. "ಇದು ನನ್ನ ಮೊದಲ ಸಂಬಳದ ಮೊದಲ ಉಡುಗೊರೆ ನಿಮಗಾಗಿ", ಅಂತ ಹೇಳಿ ಭಾವುಕನಾಗಿ ಬಿಟ್ಟೆ. "ಇದೆಲ್ಲಾ ಯಾಕೋ ತರೋಕೆ ಹೋದೆ?" ಅಂತ ಅಮ್ಮ ಎಲ್ಲಾ ಅಮ್ಮಂದಿರ common dialogue ಹೇಳಿದ್ದಳು. "ನಿಮ್ಮ ಮುಖದಲ್ಲಿನ ಈ  ಸಂತೋಷ ನೋಡೋಕೆ ನಾನು ಬೆಳಗ್ಗಿನಿಂದ ಕಾಯ್ತಾ ಇದ್ದೆ. ನಾನು ಅಲ್ಲಿಂದ  just ಫೋನ್ ನಲ್ಲಿ ನಿಮಗೆ wish ಮಾಡಿದ್ದರೆ, May be ನಿಮ್ಮ ಮುಖದಲ್ಲಿನ ಈ ಖುಷೀನಾ ನೋಡೋಕೆ ಆಗ್ತಾ ಇರಲಿಲ್ಲ." ಅಂತ ಹೇಳಿದಾಗ ಅಮ್ಮ ಖುಷಿಯ ಮಹಾಪೂರದಲ್ಲಿ ತೇಲಿ ಹೋಗಿದ್ದು ಅವರ ಮುಖದಲ್ಲಿ ಹಾಗೇ ಕಾಣಿಸ್ತಾ ಇತ್ತು. ನಾನು ಇನ್ನೊಂದಿನ ಅಲ್ಲೇ ಇರ್ತೀನಿ ಅಂದಾಗಂತೂ ಅವರ ಖುಷಿ double ಆಗಿತ್ತು. 

                           ಚಂದ್ರನ ಆ  ಬೆಳದಿಂಗಳ ಬೆಳಕಲ್ಲಿ, ಅಮ್ಮನ ಕೈತುತ್ತಿನೊಂದಿಗೆ ಆ ದಿನ ಮುಗಿಯುವುದರಲ್ಲಿತ್ತು. ಇನ್ನೇನು ಎಲ್ಲರೂ ಮಲಗಲೆಂದು ಮನೆಯೊಳಕ್ಕೆ ಹೋಗ್ತಾ ಇದ್ವಿ. ಅದೇಕೋ ಅಪ್ಪ ನನ್ನನ್ನು ಹತ್ತಿರ ಕರೆದರು. 

                           "ಚಿರು, ಅದೆಷ್ಟೋ ದಿನ ಆದ ಮೇಲೆ ನೀನು ಮನೆಗೆ ಬಂದಿದ್ದೀಯ. ಎಲ್ಲರು ಅದೆಷ್ಟು ಖುಷಿಯಲ್ಲಿ ಇದ್ದೀವಿ ಗೊತ್ತಾ? ನೀನು ಕೆಲಸ ಸಿಕ್ತು ಅಂತ Pune ಸೇರಿದ ಮೇಲೆ ಹಾರೋದನ್ನು ಕಲಿತ ಹಕ್ಕಿ ಗೂಡನ್ನು ಬಿಟ್ಟು ಎಲ್ಲೋ ಹಾರಿ ಹೋಗೋ ತರಹ ನೀನೂ ಮನೆಯ attachments ನಿಂದ ದೂರ ಆಗ್ತಿದ್ದೀಯ ಅಂತ ಅನ್ನಿಸ್ತು. ಆದರೆ ಇವಾಗ ಅನ್ನಿಸ್ತಿದೆ ಅದೆಲ್ಲಾ ನನ್ನ ತಪ್ಪು ಕಲ್ಪನೆ ಅಂತ. ನೀನು ಮತ್ತು ಚಿಂತೂ ಯಾವತ್ತಿದ್ರೂ ಈ ಮನೆಯನ್ನು ಬೆಳಗೋ ಪುಟಾಣಿಗಳು. ನೀನು ಯಾವತ್ತೂ ನಮ್ಮ ಖುಷಿಯನ್ನು, ನೆಮ್ಮದಿಯನ್ನು ಬಯಸ್ತೀಯ ಅಂತ ಗೊತ್ತು. ಇವತ್ತು ನಿಮ್ಮಮ್ಮನ ಕಣ್ಣಲ್ಲಿ ಎಂದೂ ಕಾಣದ ಆ ಖುಷಿಯನ್ನು ಕಂಡೆ. ನನಗಂತೂ ನನ್ನ ಖುಷಿಯನ್ನು ಅದ್ಹೇಗೆ ಹೇಳಬೇಕು ಅಂತ ಗೊತ್ತಾಗ್ತಿಲ್ಲ.... ಅದ್ಯಾಕೋ ನೀನು ಹುಟ್ಟಿದ ದಿನ ಖುಷಿಗೆ Diary ಬರೆದವನು ಇವತ್ತು ಯಾಕೋ ಮತ್ತೆ ಬರೀಬೇಕು ಅನ್ನಿಸ್ತಿದೆ." ಅಂತ ಭಾವುಕರಾಗಿ ನನ್ನನ್ನು ತಬ್ಬಿಕೊಂಡು ಬಿಟ್ಟರು. ಅವತ್ತು ಅದೆಷ್ಟೋ ಹೊತ್ತಿನವರೆಗೂ ನಾವಿಬ್ರೂ ಮಾತಾಡಿದ್ವಿ. Some Moments in Life are Priceless...!!! ಅದೆಷ್ಟೋ ಒತ್ತಡಗಳಿಂದ ಕೂಡಿದ್ದ ನನ್ನ ಮನಸ್ಸು ಕೂಡ ಹಗುರವಾಗಿತ್ತು. 
                        
                            ಅಪ್ಪನಿಗೆ Goodnight ಹೇಳಿ room ಕಡೆ ಬರ್ತಾ ಇದ್ದೆ.  ಯಾಕೋ ನಿದ್ದೆ ಬರೋಲ್ಲಾ ಅಂತ ಅನ್ನಿಸ್ತು. ಚಿಂತೂ ಕೂಡ ಇನ್ನೂ ಮಲಗಿರಲಿಲ್ಲ. ಇಬ್ಬರೂ terrace ಗೆ ಹೋದ್ವಿ. ಮೊದಲಿನಂತೆ ಆಕಾಶದಲ್ಲಿನ ನಕ್ಷತ್ರ ನೋಡ್ತಾ ಮಲಗೋಣ ಅಂತ decide ಮಾಡಿದ್ವಿ. ಬೆಳಗ್ಗಿನಿಂದ ಚಿಂತೂನ ರೇಗಿಸದೆ ಬೇಜಾರಾಗಿ ಬಿಟ್ಟಿತ್ತು. ಚಿಂತೂ ಸುಮ್ಮನೆ ಆಕಾಶ ನೋಡುತ್ತಾ "ಒಂದು", "ಎರಡು", "ಮೂರು" ಅಂತ ನಕ್ಷತ್ರ ಎಣಿಸುತ್ತಾ ಇದ್ದಳು. 



ಚಿರು: ನೀನೇನೇ ನಕ್ಷತ್ರ ಎಣಿಸುತ್ತಾ ಇದ್ದೀಯಾ? ಮೊದಲೇ ನೀನು Maths ನಲ್ಲಿ weak :-P 
ಚಿಂತೂ: Oh!! ನೀನೇನೋ Maths ನಲ್ಲಿ 100 ತೊಗೊಂಡಿರೋ ಹಾಗೆ ಮಾತಾಡ್ತಿದ್ಯಾ, ನೀನೂ ಸಹ Just Pass ತಾನೇ? :-P
ಚಿರು: ನಾನು at least just pass ಆದೆ. ಆದರೆ ನೀನು 2nd Standard ನಲ್ಲೇ Maths ನಲ್ಲಿ 2 times fail ಆಗಿದ್ದೆ ನೆನಪಿದ್ಯಾ? Hahaha 
ಚಿಂತೂ: Oh!! ಅದೆಲ್ಲಾ ಬಿಡು. ಹೌದು ಅಪ್ಪ-ಅಮ್ಮನ ಜೊತೆ ನನಗೂ ಏನಾದ್ರೂ gift ತೊಗೊಂಡು ಬರಬೇಕು ಅಂತ ಅನ್ನಿಸಲಿಲ್ಲ ಅಲ್ವಾ ನಿನಗೆ? ಅದೇ ನಿನ್ನ Girlfriend ಗೆ ಆಗಿದ್ರೆ ತೊಗೊಂಡು ಬರದೇ ಇರ್ತಿದ್ಯಾ? :-P 
ಚಿರು: ಹೌದು. ನಿನಗೆ ಯಾಕೆ ದುಡ್ಡು waste ಮಾಡ್ಲಿ?
ಚಿಂತೂ: ಹೌದೌದು... And yeah ಯಾರೋ ಅದು ಅರ್ಚನಾ ಅಂದ್ರೆ? ನಿನ್ನ phoneನಲ್ಲೆಲ್ಲಾ ಅವಳದೇ  photos ಇದೆ. Dial History ನಲ್ಲೂ ಅವಳದೇ ಹೆಸರು ಇದೆ. ಏನ್ ಸಮಾಚಾರ? :-P 
ಚಿರು: ನೀನ್ಯಾಕೆ ನನ್ನ phone check ಮಾಡಿದೆ? ಕೋತಿ !!

                                ಹೀಗೆ As usual ನಮ್ಮಿಬ್ಬರ ಜಗಳ ಮತ್ತೆ ಶುರುವಾಗಿತ್ತು....ಸುಮ್ಮನೆ ಆಕಾಶ ನೋಡಿದೆ. ನಕ್ಷತ್ರವೊಂದು ನಮ್ಮ ಮನೆ ಕಡೆ ನೋಡಿ ನಕ್ಕಂತೆ ಭಾಸವಾಯಿತು.  

                                Hmmm... ಬರ್ತಾ ಬರ್ತಾ ನಮ್ಮ Life ಎಷ್ಟು mechanical ಆಗ್ತಾ ಇದೆ ಅಲ್ವಾ? ನಾವು ಚಿಕ್ಕವರಿದ್ದಾಗ ಅಮ್ಮನ ಮಡಿಲಲ್ಲಿ ಮಲಗಿ ದಿನದ ವರದಿ ಒಪ್ಪಿಸಬೇಕಾದರೆ ಅನುಭವಿಸುತ್ತಿದ್ದ ಆ ಖುಷಿ, ಗಾಡಿಯಲ್ಲಿ ಅಪ್ಪನ ಹಿಂದೆ ಕುಳಿತು ಊರು ಸುತ್ತುತ್ತಾ ಮನಸಿಗೆ ಬರೋ ಎಲ್ಲಾ questions ಕೇಳೋದ್ರಲ್ಲಿ ಇದ್ದ ಆ curiosity, ಅಜ್ಜಿ ಹೇಳ್ತಾ ಇದ್ದ ಸುಳ್ಳು ಕಥೆಗಳನ್ನು ನಿಜ ಅಂತ ನಂಬಿಕೊಂಡ ಆ ದಿನಗಳಲ್ಲಿ Life ಎಷ್ಟು ಚೆನ್ನಾಗಿತ್ತಲ್ವಾ? ಅದೇ ಈಗ Independence ಅನ್ನೋ ಹೆಸರಲ್ಲಿ Life ನ ಅನೇಕ sensitivities ನ ಕಳೆದುಕೊಳ್ಳುತ್ತಾ ಇದ್ದೀವಿ ಅಂತ ಅನ್ನಿಸೋಲ್ವಾ? "ಅಪ್ಪಾ, I Love You","Miss you ಅಮ್ಮ" ಅಂತ ಈಗ ಹೇಳೋಕೆ ತುಂಬಾ ಕಷ್ಟ ಅನಿಸುತ್ತೆ ಅಲ್ವಾ? ನಮ್ಮದೇ ಮನೆಗೆ ಮತ್ತೆ "ಮಗುವಾಗಿ" ಮರಳೋದರಲ್ಲಿ ಎಷ್ಟು ಖುಷಿ ಇದೆ ಗೊತ್ತಾ? ಎಷ್ಟೇ ಆದರೂ, ನಾವೆಷ್ಟೇ ದೂರದಲ್ಲಿ ಇದ್ರೂ, Life ನಲ್ಲಿ ನಾವೆಷ್ಟೇ ಎತ್ತರಕ್ಕೆ ಬೆಳೆದರೂ, ಅಪ್ಪ-ಅಮ್ಮನಿಗೆ ನಾವು ಯಾವಾಗಲೂ ಪುಟಾಣಿಗಳೇ ತಾನೇ? ಓಡ್ತಾ ಇರೋ ಈ ಪ್ರಪಂಚದ ಹಿಂದೆ ಓಡೋದನ್ನು ಕ್ಷಣ ಮಾತ್ರಕ್ಕೆ ನಿಲ್ಲಿಸಿ ಹಿಂದೆ ತಿರುಗಿ ನೋಡಿದರೆ ಅಲ್ಲಿ ನಮ್ಮ Familyಯವರು ನಮ್ಮನ್ನು ಎಷ್ಟೇ miss ಮಾಡ್ಕೋತಿದ್ರೂ, ನಾವು ಓಡೋದನ್ನು ನೋಡಿ ಅದೆಷ್ಟು ಖುಷಿ ಪಡ್ತಾ ಇರ್ತಾರೆ  ಗೊತ್ತಾ? ಒಂದು "Perfect Family" ಇರೋಕೆ ಸಾಧ್ಯಾನೋ ಇಲ್ವೋ ನನಗೆ ಗೊತ್ತಿಲ್ಲಾ. ಆದರೆ ಒಂದು "Beautiful Family" create ಮಾಡೋದು ಮಾತ್ರ ನಮ್ಮ ಕೈಯಲ್ಲೇ ಇದೆ ಅನ್ನಿಸುತ್ತೆ. Maybe, the only thing it requires is our TIME :) 

                                ನೀವೇನ್ ಹೇಳ್ತೀರಾ??     

                                                                                                -ಮೇದಿನಿ.ಎಂ.ಭಟ್